ಬೇಟಣ್ಣನ ಬೇಟೆ.
ಬೇಟಣ್ಣ ವೊಬ್ಬ ಹವ್ಯಾಸಿ ಬೇಟೆಗಾರ, ಅವರದ್ದು ಇಂತಹದ್ದೇ ವೃತ್ತಿ ಎಂದು ಹೇಳುವಂತಿಲ್ಲ, ಯಾಕೆಂದ್ರೆ ಅವರ ವೃತ್ತಿಗಳು ಕಾಲಕ್ಕೆ ತಕ್ಕಂತೆ, ಬೇಸಿಗೆ ಯಲ್ಲಿ ಗುಜರಿ ವ್ಯಾಪಾರ, ಮಳೆಗಾಲ ಹತ್ತಿರ ಬಂದರೆ ಹಲಸಿನ ಹಣ್ಣಿನ ವ್ಯಾಪಾರ ಹೀಗೆ ಚಳಿಗಾಲ ದಲ್ಲಿ ಮತ್ತೊಂದು ಮಗದೊಂದು ವ್ಯವಹಾರಗಳು. ಹಾಗಿದ್ದೂ ಕೂಡ ಅವರಿಗೆ ಬೇಟೆಯಾಡುವ ಹವ್ಯಾಸ, ಹಾಗಂತ ಅವರು ಮಹಾನ್ ಬೀಟೆಗಾರರಲ್ಲ ಚಿಕ್ಕ ಪ್ರಾಣಿಗಳಾದ ಮೊಲನೋ ಕಾಡುಕೋಳಿಯನ್ನೋ ಬೇಟೆಯಾಡುವವರು.
ಹೀಗೆ ಅವರು ಹಗಲು ಹೊತ್ತಿನಲ್ಲಿ ತಮ್ಮ ವೃತ್ತಿಗಳನ್ನು ಮುಗಿಸಿ ರಾತ್ರಿ ಬೇಟೆಯಾಡಲು ಹೋಗುತ್ತಿರುವುದುಂಟ, ಬೇಟಣ್ಣ ವೊಬ್ಬ ಒಳ್ಳೆ ಎತ್ತರದ ಆಳು, ಗುಂಡಗಿನ ದೇಹ, ಧದೂತಿ ಹೊಟ್ಟೆ, ಸುಮಾರು 55 ಆಸುಪಾಸಿನ ವಯ್ಯಸ್ಸು, ಸುತ್ತಮುತ್ತದ ಊರಿಗೆಲ್ಲ ಪರಿಚಿತರೆ ಯಾಕೆಂದರೆ ಅವರು ಮೊದಲು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಬಸ್ ಚಾಲಕನಾಗಿ. ಬಸ್ ಚಾಲಕರಾಗಿದ್ದಾಗ ಊರಿನ ಅಂಗಡಿಗಳಿಗೆ ಸಣ್ಣಪುಟ್ಟ ಅಗತ್ಯ ಸಾಮಾನು ಗಳನ್ನು ಪಟ್ಟಣದಿಂದ ತಂದುಕೊಡುತ್ತಿದ್ದರು ಹಾಗಾಗಿ ಅವರು ಊರಿನ ಜನಗಳಿಗೆಲ್ಲ ಪರಿಚಯ ಇರುವ ಮನುಷ್ಯ. ಆದರೆ ಅವರು ತಮ್ಮ ಚಾಲಕ ವೃತ್ತಿಗೆ ತಿಲಾಂಜಲಿ ಇಟ್ಟು ಸುಮಾರು 8, 10, ವರ್ಷಗಳಾಗುತ್ತಾಬಂದಿತ್ತು, ಈಗ ಬೇಟೆ ಯಾಡುವ ತಮ್ಮ ಹವ್ಯಾಸವನ್ನು ಸ್ವಲ್ಪ ದೂರವೇ ಇಟ್ಟಿದ್ದರು, ಯಾಕೆಂದರೆ ತಮ್ಮ ದೇಹಕ್ಕೆ ವಯ್ಯಸ್ಸದುದರಿಂದ ಮತ್ತು ಕಾಡುಪ್ರಾಣಿಗಳ ಕೊರತೆ ಇಂದ, ಆದರೆ ಮನಸ್ಸು ಆಗಾಗ ಬೇಟೆಗೆ ಹಾತೊರೆಯುತ್ತಿದ್ದಾಗ ಮಾತ್ರ ಕೋವಿ ಹಿಡಿದು ಹೊರಟು ಮೊಲನೋ ಕಾಡು ಕೋಳಿಯನ್ನೋ ಹಿಡಿದು ತರುತ್ತಿರುವುದುಂಟು, ಈಗ ಅವರು ಮೊದಲಿನಂತೆ ದೂರದ ಕಾಡಿನಲ್ಲಿ ಬೇಟೆಯಾಡುವುದನ್ನು ಭಾಗಶಃ ನಿಲ್ಲಿಸಿದ್ದರು, ಆದರೆ ಊರಿನ ಹತ್ತಿರದ ಕಾಡುಗಳೆಲ್ಲ ಚಿರಪರಿಚಿತವಾದುದರಿಂದ ಬೇಟೆಗೆ ಹೋಗುತ್ತಿದ್ದರು.
ಹಾಗೆಯೇ ಬೇಟಣ್ಣ ನ ಪಕ್ಕದಮನೆಯವರಾದ ಗೋಪಾಲ ನಾಯಕರೂ ಕೂಡ ಬೇಟೆಯ ಹುಚ್ಚಿನವರೇ, ಅವರೂ ಮತ್ತು ಬೇಟಣ್ಣನೂ ಸೇರಿಕೊಂಡು ತಮ್ಮ ಯವ್ವನದ ದಿನಗಳಲ್ಲಿ ಬೇಟೆಯಾಡಿದವರೇ. ಆದರೆ ಈಗ ಗೋಪಾಲ ನಾಯಕರು ಒಂದು ತ್ರಿಚಕ್ರ ವಾಹನವನ್ನು ಇಟ್ಟು ಕೊಂಡು ಊರಿನಲ್ಲಿ ಬಾಡಿಗೆ ಮಾಡುತ್ತಿದ್ದರು, ಅದು ನವೆಂಬರ್ ತಿಂಗಳು ಗೋಪಾಲ ನಾಯಕರಿಗೆ ತಮ್ಮ ಊರಿನವರೇ ಆದ ರವಿ ಅವರಿಂದ ರಾತ್ರಿ ಬಾಡಿಗೆಯ ಆಹ್ವಾನ ಬಂದಿತ್ತು, ರವಿಅವರು ಊರಿನ ಚೇಣಿ ದಾರದು ತಮ್ಮ ಊರಿನ ಹೊರವಲಯದ ತೋಟದ ಚೇಣಿಯಾದ್ಧರಿಂದ ಅವರು ಅಡಿಕೆ ತೆಗೆದು ಅಲ್ಲೇ ಆಳುಗಳಿಂದ ಸುಲಿಸಿ ಅಡಕೆಯ ಸುಲಿಬೀಳೆ( ಅಡಿಕೆಯನ್ನು ಸುಲಿದು ಕತ್ತರಿಸಿರುವ ಅಡಿಕೆ) ಯನ್ನು ಸಾಗಿಸಲು ಗೋಪಾಲ ಅವರ ಗೂಡ್ಸ್ ಅನ್ನು ಬಾಡಿಗೆಗೆ ಕೇಳಿದ್ದರು ಸಾಮಾನ್ಯವಾಗಿ ಅಡಿಕೆ ಸುಲಿತ ಮುಗಿಯುವುದು ರಾತ್ರಿ ಯಾಗುತ್ತಿದ್ದರಿಂದ ಗೋಪಾಲ ಅವರಿಗೂ ರಾತ್ರಿ ಬಾದಿಗೆಯಲ್ಲಿ ಹೋದರೆ ದಾರಿಯಲ್ಲಿ ಬೇಟೆಗೂ ಅವಕಾಶ ದೊರೆಯುತ್ತದೆ ಎಂದುಕೊಂಡು ಬಾಡಿಗೆಗೆ ಒಪ್ಪಿಕೊಂಡಿದ್ದರು.
ತೋಟ ದಿಂದ ರವಿ ಅವರ ಮನೆಗೆ ಹೆಚ್ಚು ದೂರಇಲ್ಲವಾದರೂ ಒಳ್ಳೆ ಕಾಡಿನ ದಾರಿ ಅದಾಗಿತ್ತು, ಹಾಗಾಗಿಧರಿಂದಲೇ ರಾತ್ರಿ ಜನ ಸಂಚಾರ ಕಮ್ಮಿಯಾಗಿ ಕಾಡು ಪ್ರಾಣಿಗಳಸಂಚಾರ ಶುರುವಾಗುತ್ತಿತ್ತು, ರವಿ ಅವರಿಗೆ ಅಡಿಕೆ ಯನ್ನು ತೋಟದ ಹತ್ತಿರ ಸುಲಿಯುವ ಜನರು ಲಭ್ಯ ಇದ್ದುದರಿಂದ ಅಡಿಕೆ ಸುಲಿಸಿ ರಾತ್ರಿಯೇ ಸಾಗಿಸುವುದು ಒಳ್ಳೆಯದೆಂದು ಬಾಡಿಗೆಯನ್ನು ತಮ್ಮ ವಿಶ್ವಾಸಿಗರಾದ ಗೋಪಾಲ ಅವರಿಗೇ ಹೇಳಿದ್ದರು. ಅಲ್ಲದೇ ಗೋಪಾಲ ಅವರಿಗೂ ಸಣ್ಣ ಪುಟ್ಟ ಶಿಕಾರಿ ಮಾಡಬಹುದೆಂದು ಅನ್ನಿಸಿತ್ತು ಆಧರಿಂದಲೇ ಅವರೂ ಕೂಡ ಬಾಡಿಗೆಗೆ ಒಪ್ಪಿದ್ದರು. ಒಂದೆರೆಡು ದಿನ ಬಾಡಿಗೆಗೆ ಹೋದ ಮೇಲೆ ಗೋಪಾಲರಿಗೆ ಆ ಕಾಡು ದಾರಿಯ ಪರಿಚಯ ಚೆನ್ನಾಗಿಯೇ ಆಯಿತು, ಯಾವುದು ಶಿಕಾರಿಗೆ ನುಗ್ಗುವುದಕ್ಕೆ ಪ್ರಶಸ್ತ ಸ್ಥಳ ಯಲ್ಲಿ ಕಾಡುಹೆಚ್ಚಿದೆ ಯಲ್ಲಿ ಗಿಡಗಂಟಿಗಳಿವೆ ಎಂಬುದು ಚೆನ್ನಾಗಿಯೇ ಪರಿಚಯವಾಯಿತು, ಮತ್ತು ರಸ್ತೆಗೆ ಯಲ್ಲಿ ಹತ್ತಿರವಾಗಿ ಶಿಕಾರಿಗೆ ನುಗ್ಗ ಬಹುದು ಎಂದು ಅಂದಾಜು ಲೆಕ್ಕಾಚಾರ ಹಾಕಿದ್ದರು, ಬಾಡಿಗೆ ಸುಮಾರು ರಾತ್ರಿ 10 ಅಥವಾ 11 ಗಂಟೆಗೆ ಇದ್ದಿದ್ಧರಿಂದ ಮನುಷ್ಯ ಸಹಜ ಭಯ ಕೂಡ ಇತ್ತು, ಆ ಭಯಕ್ಕೆ ಮುಖ್ಯ ಕಾರಣವೆಂದರೆ ಸುಮಾರು ನಾಲ್ಕೋ ಅಥವಾ ಐದನೇ ಬಾಡಿಗೆಯ ದಿನವಿರಬೇಕು ಗೋಪಾಲ ಅವರ ಗೂಡ್ಸ್ ಕಾಡು ದಾರಿಯಲ್ಲಿ ಬರುತ್ತಿದ್ದಾಗ ತಮ್ಮ ಗೂಡ್ಸ್ ನ ಬೆಳಕಿಗೆ ಅನಾತಿ ದೂರದಲ್ಲಿ ಒಂದು ಆಕೃತಿ ಕಂಡಿತು ಅವರಿಗೆ ಮನುಷ್ಯರೇ ಅಥವಾ ದೆವ್ವವೇ ಎಂಬ ಸಹಜ ಅನುಮಾನ ಶುರುವಾಯಿತು, ಸಾಮಾನ್ಯ ವಾಗಿ ಮನಸ್ಸು 'ದೆವ್ವ' ಅನ್ನುವುದರ ಕಡೆ ರಾತ್ರಿ ಹೆಚ್ಚು ವಾಲುವುದರಿಂದ, ಅವರ ಮನಸ್ಸಿ ನಲ್ಲೂ ಸಹಜವಾಗಿ ಹಾಗೇ ಭಾವನೆವುಂಟಾಯಿತು ದೇಹ ಬೆದರಿತು ಹಣೆಯಲ್ಲಿ ಬೆವರ ಹನಿಗಳು ಕಾಣಿಸಿತು, ಗೂಡ್ಸ್ ನ ಚಕ್ರ ಗಳು ಇನ್ನೇನು ಆಕೃತಿಯ ಹತ್ತಿರ ಬಂದಾಗಲೇ ಗೊತ್ತಾಗಿದ್ದು ಅದು ಪಕ್ಕದ ಊರಿನ ಭಟ್ಟರೆಂದು, ಅವರು ರಾತ್ರಿ ಯಲ್ಲಿ ತಮ್ಮ ತೋಟಕ್ಕೆ ಅದೇ ಮಾರ್ಗ ವಾಗಿ ರಾತ್ರಿ ನೀರು ಬಿಡಲು ಹೋಗುತ್ತಿದ್ದದು ವಾಡಿಕೆ, ಗೋಪಾಲ ಅವರಿಗೆ ವಾಸ್ತವಕ್ಕೆ ಬರಲು ಸಮಯ ಹಿಡಿಸಿದರೂ ಕೂಡ ಆ ಘಟನೆ ಮನಸ್ಸಿನಲ್ಲಿ ಪ್ರಭಾವ ಬೀರಿತ್ತು, ಆಧರಿಂದಲೇ ಅವರು ಮುಂದಿನ ಯಲ್ಲಾ ಬಾಡಿಗೆಗೂ ತಮ್ಮ ಬೇಟೆಯ ಮಿತ್ರ ಬೇಟಣ್ಣ ನನ್ನು ಕರೆದುಕೊಂಡು ಹೋಗಲು ತೀರ್ಮಾನ ಮಾಡಿದರು.
ಗೋಪಾಲ ಅವರಿಗೆ ಈ ಬಾಡಿಗೆ ನುಂಗಲಾರದ ತುತ್ತಾಗಿದ್ದು ಆ ಘಟನೆ ನೆಡೆದಾಗಲೇ, ಯಾಕೆಂದರೆ ಇವರ ಬೇಟೆಯ ಚಪಲ, ಬಾದಿಗೆದಾರರ ವಿಶ್ವಾಸ, ಮತ್ತು ಇವರ ಧ್ಯರ್ಯ(!?), ಇವಿಸ್ಟನ್ನು ಪಣಕ್ಕಿಟ್ಟು ಬಾಡಿಗೆಯನ್ನು ಉಳಿಸಿ ಕೊಳ್ಳಲು ಬೇಟಣ್ಣನ ಸಹಾಯಹಸ್ತ ಇವರಿಗೆ ಬೇಕಾಯ್ತು.
ಗೋಪಾಲ ಅವರಿಗಿಂತ ನಮ್ಮ ಬೇಟಣ್ಣನು ಬೇಟೆಯಲ್ಲಿ ಸ್ವಲ್ಪ ಚತುರ ಬೇಟೆಗಾರ, ಹೀಗೆ ಬೇಟಣ್ಣ ತಾವು ದಿನಾ ಹೋಗುವ ದಾರಿಯನ್ನು ಗೋಪಾಲ ಅವರಿಗಿಂತ ಚನ್ನಾಗಿ ಅರಿತರು ಹೀಗೆ 2 ದಿನ ಅವರ ಬೇಟೆಯ ಯೋಜನೆಗೆ ಮೀಸಲಿಟ್ಟರು. ಹಾಗೆಯೇ 3ನೆ ದಿನ ತಮ್ಮ ಯೋಜನೆ ಯನ್ನು ಕಾರ್ಯರೂಪಕ್ಕೆ ತರಲು ಮುಂದಡಿ ಇಟ್ಟರು, 2 ಬ್ಯಾಟರಿ 2 ಕೋವಿ ತೆಗೆದು ಕೊಂಡು 3ನೆ ದಿನ ಅಡಿಕೆಯನ್ನುತರುವಾಗ ಕಾಡಿಗೆ ನುಗ್ಗುವುದೆಂದು ತೀರ್ಮಾನಿಸಿ ಹಾಗೆಯೇ ಗೂಡ್ಸನ್ನು ನಿಲ್ಲಿಸಿ ಕಾಡು ಹೊಕ್ಕರು.
ಬೇಟಣ್ಣ ಎಂದಿನಂತೆ ಬೇಟೆಯ ರುವಾರಿಯನ್ನುಹೊತ್ತರು, ಹೆಜ್ಜೆಯ ಸಪ್ಪಳ ಮಾಡದಂತೆ ಬೇಟಣ್ಣ ತಮ್ಮ ದೇಹಭಾರವನ್ನು ಕಾಲುಗಳ ಮೇಲೆ ನಿದಾನವಾಗಿ ಹಾಕಿ ಮುಂದಡಿ ಇಡುತ್ತಿದ್ದರೆ ಗೋಪಾಲ ಕೂಡ ಅವರನ್ನು ಹಿಂಬಾಲಿಸುತ್ತಿದ್ದರು, ಹೀಗೆ ಬೇಟಣ್ಣ ಎಂದಿನಂತೆ ತಾವು ಮುಂದುವರಿಯುತ್ತಿದ್ದರು ಆದರೆ ಸ್ವಲ್ಪ ಸಮಯದ ನಂತರ ಯಾಕೋ ಹಿಂದೆತಿರುಗಿ ಗಮನಿಸುತ್ತಾರೆ ತಮ್ಮ ಹಿಂದಿರುವ ಗೋಪಾಲ ಅವರ ಹೆಜ್ಜೆ ಸಪ್ಪಳವೇ ಇಲ್ಲ! ಇವರಿಗೆ ಅಚ್ಚರಿಯ ಜೊತೆ ಸ್ವಲ್ಪ ಹೆದರಿಕೆಯು ಆಯಿತುಕೂಡ ಹಾಗೆಯೇ ಸ್ವಲ್ಪ ಹೊತ್ತಿನನಂತರ ಏನೋ ತನ್ನೆಡೆಗೆ ಹೆಜ್ಜೆಯ ಸಪ್ಪಳ ತನ್ನೆಡೆಗೆ ಬರುತ್ತಿದೆ ಎಂದು ಖಚಿತ ವಾಯಿತು ತಮ್ಮ ಆರಿಸಿದ್ದ ಟಾರ್ಚಿನ ಬೆಳಕ್ಕನ್ನು ಹೆಜ್ಜೆಯ ಸಪ್ಪಳದ ಕಡೆಗೆ ಬಿಟ್ಟು ನೋಡುತ್ತಾರೆ ಅದು ಒಂದು ಕಾಡು ಕುರಿಯಾಗಿತ್ತು ಇವರ ಟಾರ್ಚಿನ ಬೆಳಕಿಗೆ ಅದು ಪೊದೆಗಳ ನಡುವೆ ಓಡಿ ಮರೆಯಾಯಿತು.
ಬೇಟಣ್ಣ ಗೋಪಾಲ ಅವರಿಗೆ ಬಯ್ಯುತ್ತ ವಾಪಸ್ಸು ಗೂಡ್ಸ್ ಇರುವ ಜಾಗಕ್ಕೆ ಬರುತ್ತಾರೆ ಗೂಡ್ಸ್ ಇಲ್ಲ!, ಬಿದ್ದಿಮಗ ಗೋಪಾಲ ನ ಧರ್ಯದ ಬಗ್ಗೆ ಗೊತ್ತಿದ್ದ ಬೇಟಣ್ಣ ಹೀಗೆ ಹೆಜ್ಜೆ ಸಪ್ಪಳಕ್ಕೆ ಹೆದರಿ ಗೋಪಾಲ ಪರಾರಿ ಆಗಿದ್ದನೆಂದು ಮನಗಂಡು ಕಾಡಿನ ಬಳಸು ದಾರಿಯಲ್ಲಿ ಮನೆಗೆ ಹಿಂತಿರುಗಿದರು,ಮಾರನೇ ದಿನ ಬೆಳ್ಳಿಗ್ಗೆ ಗೋಪಾಲ ಬಾಡಿಗೆಗೆ ಹೊರಡುವಾಗ ಬೇಟಣ್ಣ ಬೇಕಂತಲೇ ತಮ್ಮ ನಾಯಿಗೆ "ನಿನ್ನೆ ನನ್ನನ್ನು ದಾರಿಮದ್ಯೆ ಬಿಟ್ಟುಬಂದೆಯ ಬಡ್ಡಿಮಗನೆ" ಎಂದು ಗೋಪಾಲರಿಗೆ ಗೊತ್ತಾಗುವಂತೆ ಬಯ್ದು, ಮನೆಯೊಳಗೆ ಹೊಕ್ಕರು.
ಗೋಪಾಲ ಅವರು ಎಂದಿನಂತೆ ತಮ್ಮ ರಾತ್ರಿ ಬಾಡಿಗೆಗೆ ತಮ್ಮ ಜೊತೆ ಹೆಂಡತಿ ಯನ್ನು ಕರೆದು ಕೊಂಡು ಹೋಗಲು ಶುರು ಮಾಡಿದರು!.